ಹೆಬ್ಬುಲಿ, ಎಸ್.ಕೃಷ್ಣ ನಿರ್ದೇಶನದ 2017ರ ಕನ್ನಡ ಭಾಷೆಯ ಚಿತ್ರ. ಮಾಣಿಕ್ಯ ಚಿತ್ರದ ನಂತರ ಮತ್ತೆ ಸುದೀಪ್ ಮತ್ತು ವಿ. ರವಿಚಂದ್ರನ್ ಒಟ್ಟಿಗೆ ನಟಿಸಿದ್ದಾರೆ. ಈ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ನಾಯಕಿಯಾಗಿ ಅಮಲಾ ಪೌಲ್ ಪಾದಾರ್ಪಣೆ ಮಾಡಿದರು. ಎಸ್.ಆರ್.ವಿ.ಪ್ರೋಡಕ್ಷನ್ಸ್ ಚಿತ್ರವನ್ನು ನಿರ್ಮಿಸಿದ್ದಾರೆ, ಎ. ಕರುಣಾಕರ್ ಛಾಯಾಗ್ರಹಣ ಮಾಡಿದ್ದಾರೆ. ಈ ಚಿತ್ರವನ್ನು ಬೆಂಗಳೂರು, ಹೈದರಾಬಾದ್, ಜಮ್ಮು ಕಾಶ್ಮೀರ ಮತ್ತು ಐಸ್ ಲ್ಯಾಂಡ್ ನಲ್ಲಿ ಚಿತ್ರೀಕರಿಸಲಾಗಿದೆ. == ==